ಒಮ್ಮೆ ಹೂದೋಟದಲಿ …
Posted by betala in ಮಂಕುತಿಮ್ಮನ ಕಗ್ಗ on June 8, 2011
ಒಮ್ಮೆ ಹೂದೋಟದಲಿ
ಒಮ್ಮೆ ಕೆಳೆಕೂಟದಲಿ
ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸರದಲಿ
ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗು ಮಂಕುತಿಮ್ಮ !!!
ಪುಸ್ತಕದ ಅರಿವು
Posted by betala in ಮಂಕುತಿಮ್ಮನ ಕಗ್ಗ on June 6, 2011
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ
ಚಿತ್ತದಲಿ ದೊರೆತರಿವು ತರು ತಳೆದ ಪುಷ್ಪ !
ವಸ್ತು ಸಾಕ್ಷಾತ್ಕಾರ ಅಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ !!.
ಡಾ || ಡಿ.ವಿ.ಜಿ
ಪ್ರೇಮಿ
ನಿನ್ನ ನೋಡುತ ನಾನು ಕುಳಿತರೆ
ನನ್ನನೇ ನಾ ಮರೆತೇ
ನಿನ್ನ ಬಗ್ಗೆ ನಾ ಹಾಡಿದರೆ
ಅದುವೇ ಒಂದು ಕವಿತೆ
ಕಾಲ ಹರಣವ ಮಾಡ ಬೇಡವೋ
ಅಂತ ಹೇಳಿದ ಆ ಜ್ಞಾನಿ
ಇಂತ ಸಮಯವ ಬಿಡುವನೆ ?
ಈ ಪ್ರೇಮಿ !!
ಈ ಪಯಣ…
ಈ ಪಯಣ
ಬಲು ಕಠಿಣ
ಆದರೇನಂತೆ ಆಗು ನೀ ಜಾಣ
ನಡು ನದಿಯಲಿ ಸಿಕ್ಕ ಈ ದೋಣಿ
ತಳಮಲಿಸಿದೆ ಕಾಣದೆ ದಡ
ತಾಳ್ಮೆ ಇರಲಿ ನೀ ಕೇಳು
ನಿನ್ನ ಎದುರು ಇಹುದು ಆ ದಾರಿ
ನಿನ್ನ ಕಣ್ಣಿಗೆ ಕಾಣುತ್ತಿಲ್ಲವಷ್ಟೇ
ಅಮಾವಾಸ್ಯ ಕತ್ತಲೆ ಕವಿದಿರಲು
ಚಢಪಡಿಸುತಿರುವೆ ಏನೋ ಹುಡುಕಾಟ
ಒಳದೀಪದ ಬೆಳಕಲಿ ನೀ ನೋಡು
ನಿನ್ನ ಪಕ್ಕದಲ್ಲಿ ಇಹುದು
ನೀ ಹುಡುಕುತ್ತಿರುವುದು
ಉತ್ತಮ
Posted by betala in ಹೇಳೋಕೆ ಬಲು ಚೆನ್ನ on February 22, 2010
ಉತ್ತಮವಾದ ಕೆಲಸಗಳನ್ನು ಮಾಡು , ಕೆಲಸಗಳನ್ನು ಉತ್ತಮವಾಗಿ ಮಾಡು.
ನೆನ್ನೆ ಕೆಲಸಗಳು
ನೆನ್ನೆ ಕೆಲಸಗಳು
ಇಂದಿನ ಸಮಯ ತಿಂದರೆ
ಮುಂದೆ ಹೋಗೋ ಮಾತೆಲ್ಲಿ ?
ಕೆಸರಲ್ಲಿ ಬಿದ್ದವ
ಸಿಕ್ಕ ಹುಲ್ಲನು ಬಿಟ್ಟರೆ
ಬದುಕುವ ಮಾತೆಲ್ಲಿ ?
ನಾವು ಬೇಜಾರು ಮಾಡಿಕೊಳ್ಳಬಾರದು
Posted by betala in ಸುಮ್ಮನೆ ಗೀಚಿದ್ದು on February 11, 2010
ನಾವು ಬೇಜಾರು ಮಾಡಿಕೊಳ್ಳಬಾರದು , ಅಪ್ಪಿ ತಪ್ಪಿ ಬೇರೆಯವರಿಗೆ ಬೇಜಾರು ಆದ್ರೆ ನಾವೇನು ಮಾಡೋಕೆ ಆಗೋಲ್ಲ. ಇಲ್ಲಿ ಮುಖ್ಯವಾಗಿ ನಾವು ಆರಾಮಾಗಿ ಇರ್ಬೇಕು .
ಉದಾಹರಣೆಗೆ ,ನಮ್ಮ ಮ್ಯಾನೇಜರ್ ಏನಾದ್ರು ನಮ್ಮ ಮೇಲೆ ಉರಿದು ಬಿದ್ರೆ , ಅದು ನಮ್ಮ ತಪ್ಪ ? ಪ್ರಾಜೆಕ್ಟ್ ಏನಾದ್ರು ಮಠ ಹತ್ತಿದರೆ ಅದು ಪ್ರಾಜೆಕ್ಟ್ ಹಣೆಬರಹ ಅಲ್ವ ?
ಯಾರೋ ಪೆದ್ದು ಪೆದ್ದು ಪ್ರಶ್ನೆ ಕೇಳ್ತಾರೆ , ಉತ್ತರ ಕೊಟ್ಟು ಯಾಕೆ ಉಗಿಸಿಕೊಳ್ಳಬೇಕು ? ಅದಕ್ಕಿಂತ ಸುಮ್ಮನಿರೋದು ವಾಸಿ ಅಲ್ವ ?
ಈಗೆ ಚಿಕ್ಕ ಚಿಕ್ಕ ವಿಷಯಗಳಿಗೆಲ್ಲ ನಾವು ಬೇಜಾರು ಕೋಪ ಮಾಡಿಕೊಳ್ಳು ತಿದ್ರೆ , ನಮ್ಮ ಆರೋಗ್ಯದ ಗತಿ ಏನು ?
ಜೋರಾಗಿ ಹೇಳು
Posted by betala in ಹೇಳೋಕೆ ಬಲು ಚೆನ್ನ on February 10, 2010
ಹೇಳುವುದನ್ನು ಜೋರಾಗಿ ಹೇಳು … ಬುದ್ದಿವಂತರು ಮತ್ತೊಮ್ಮೆ ಯೋಚಿಸುತ್ತಾರೆ, ಮೂರ್ಖರು ನಂಬುತ್ತಾರೆ !!!
-ಸುಭಾಷಿತ
ಹೆಚ್ಚು-ಕಡಿಮೆ
Posted by betala in ಹೇಳೋಕೆ ಬಲು ಚೆನ್ನ on February 10, 2010
ಮಂಗಳಾರತಿ ತಗೊಂಡ್ರೆ ಉಷ್ಣ
ತೀರ್ಥ ತಗೊಂಡ್ರೆ ಶೀತ !!!